ಭೂವಿಜ್ಞಾನ ಮತ್ತು ರಿಸರ್ವ್ E

   ಭೂ – ವಿಜ್ಞಾನ ಹಾಗೂ ಖನಿಜ ಸಂಪನ್ಮೂಲ


ಹಟ್ಟಿ ಚಿನ್ನದ ಗಣಿಯ ಪ್ರದೇಶವು ಧಾರವಾರ ವ್ಯವಸ್ಥೆಯ ಪ್ರೀ ಕ್ಯಾಂಬ್ರಿಯನ್ ಕಾಲದ ಮೆಟಾವೊಲ್ಕಾನಿಕ ಶಿಲೆಗಳನ್ನು ಒಳಗೊಂಡಿದೆ(ಇದು ಮೆಟಾಬೆಸಾಲ್ಟ್, ಆಸೀಡ್ ವೊಲ್ಕಾನಿಕ ಹಾಗೂ ಕ್ಲೊರೈಟ್ ಬೈಯೊಟೈಟ್ ಶೀಷ್ಟ್‍ಗಳನ್ನು ಹೊಂದಿದೆ). ಚಿನ್ನವು ಮುಖ್ಯವಾಗಿ ಉಪ ಸಮಾನಂತರದಿಂದ ಸಮಾನಂತರವಾಗಿ ಹರಡಿರುವ ಕ್ಲೊರೈಟ್ ಬಯೋಟೈಟ್ ಶೀಷ್ಟ್ ಎಂಬ ಶಿಲೆಯಲ್ಲಿ ಕೇಂದ್ರಿಕೃತವಾಗಿರುತ್ತದೆ.

ಹಟ್ಟಿ ಚಿನ್ನದ ಗಣಿ ವಲಯದಲ್ಲಿ 09 ಮುಖ್ಯವಾದ ಚಿನ್ನದ ಶೀಲಾ ಶ್ರೇಣಿಗಳು ಕಂಡುಬರುತ್ತವೆ. ಅವುಗಳೆಂದರೆ, ಮೇನ್ ರೀಫ್, ಪ್ರಾಸ್ಪೆಕ್ಟ್ ರೀಫ್, ಓಕ್ಲೇಜ್ ರೀಫ್, ಮಿಡ್ಡಲ್ ರೀಫ್, ಝೋನ್-ಐ ರೀಫ್, ವಿಲ್ಹೇಜ್ ರೀಫ್, ಸ್ಟ್ರೈಕ್ ರೀಫ್ ಫುಟವಾಲ್, ಸ್ಟ್ರೈಕ್ ರೀಫ್ ಹ್ಯಾಂಗಿಂಗ್+ವಾ¯ ರೀಫ್.
ಈ ರೀಫ್‍ಗಳು ಸಾಮಾನ್ಯವಾಗಿ ಓ 200 – S200 ಇ ಸ್ಟ್ರೈಕ್ ಹಾಗೂ 700 ಪಶ್ಚಿಮಭಿಮುಖದ ಡಿಪ್ ಹೊಂದಿರುತ್ತವೆ. ಇಲ್ಲಿ ದೊರೆಯುವ ಬಂಗಾರದ ಅದಿರು ಎನ್-ಎಚಲಾನ್(eಟಿ-eಛಿheಟoಟಿ) ಹಾಗೂ ಮೈಲೊನೈಟ್ ಮಾದರಿಯ ಶಿಯರ್ ಝೋನಗಳಿಂದ ಆವೃತ್ತವಾಗಿರುತ್ತದೆ. ಈ ಖನಿಜಯುಕ್ತ ರೀಫ್‍ಗಳು ಶಿಷ್ಟ್ ಹಾಗೂ ಗ್ರಾನೈಟ್ ಶಿಲೆಗಳ ಸಂಪರ್ಕಕ್ಕೆ ಬಂದನಂತರ ಹಠಾತ್ ಅಂತ್ಯಗೊಳ್ಳುತ್ತವೆ. ಉತ್ತರದಲ್ಲಿ ಈ ರೀಫ್ಗಳು 70 ಮೀಟರ್ ಅಗಲವಿರುವ ಡೈಕ ದಾಟಿದ ನಂತರವು ವಿಸ್ತರಣೆಗೊಂಡಿವೆ. ಇಲ್ಲಿ ಸ್ಟಟಿಕ್ ಶಿಲೆಯಲ್ಲಿ ದೊರೆಯುವ ಚಿನ್ನವು ಕ್ಲೊರೈಟ್ ಬಯೊಟೈಟ್ ಶಿಷ್ಟ ಎಂಬ ಕಲ್ಲಿನ ಸಮೂಹಕ್ಕೆ ಮೀಸಲಾಗಿರುತ್ತದೆ. ಈ ತೆರೆನಾದ ಶಿಲೆಗಳು ಮೆಟಾಬಸಾಲ್ಟ್ ಎಂಬ ಕಲ್ಲಿನ ಸಮೂಹದ ರೂಪಾಂತರಗೊಂಡ ಶಿಲೆಗಳಾಗಿದ್ದು ಇವು ಉಪ ಸಮಾನಂತರದಿಂದ ಸಮಾನಂತರವಾಗಿ ಹರಡಿರುವ ಶಿಯರ ವಲಯಗಳಿಗೆ ಹಾಗೂ ಸಣ್ಣ ಕ್ರಾಸ್ ಫೊಲ್ಡ, ಶಿಯರ ಬಿರಿತಗಳ ಹಾಗೂ ನಂತರ ಸಂಯೋಜಿತ ರಚನೆಗಳಿಂದ ಮಾರ್ಪಟ್ಟಿವೆ.


ಈ ತೆರನಾದ ರಚನೆಗಳು ಚಿನ್ನದ ಅದಿರಿನ ದೊರೆಯುಕೆಗೆ ಹಾಗೂ ಶೇಖರಣೆಗೆ ಕಾರಣಿಭೂತವಾಗಿರುತ್ತª.É ಇಲ್ಲಿ ಚಿನ್ನದ ಅದಿರಿನ ರೀಫಗಳ ಸ್ಟ್ರೈಕ್ ಹಾಗೂ ಡಿಪ್ಟನೊಂದಿಗೆÉ ಕವಲೊಡೆಯುವ ಪ್ರಕ್ರಿಯ ಒಂದು ವಿಶಿಷ್ಟ ರಚನೆಯಾಗಿz.É ಸ್ಪಟಿಕ ಶಿಲೆಯು ಶಿಯರ ಬಿರಿತಗಳ ವಿವಿಧ ರೂಪಗಳಲ್ಲಿ ಶೇಖರಣೆಗೊಂಡಿರುತ್ತದೆ. ಚಿನ್ನದ ಅದಿರಿನ ನಿಕ್ಷೇಪವು 31-03-2020 ರವರಗೆ 27ನೇ ಹಂತದವರೆಗೆ (87 ಮೀಟರ್) ರವರೆಗಿನ ಅಂದಾಜಿನಂತೆ 16.38 ದಶಲಕ್ಷ ಟನ್ ಆಗಿದ್ದು, ಅದರಲ್ಲಿ 4.38 ಗ್ರಾo ಪ್ರತಿ ಟನ್‍ರಷ್ಟು ಚಿನ್ನದ ಅಂಶವಿರುತ್ತದೆ. ಅಲ್ಟ್ರಾವೈಲೆಟ್ ಲ್ಯಾಂಪಗಳ ಮುಖಾಂತರ ಸವಿಸ್ತಾರವಾದ ಅನ್ವೇಷಣೆ ಹಾಗೂ ಪುನರಾವರ್ತಿತ ಮಾದರಿ ಸಂಗ್ರಹಗಳಿಂದ ಹಟ್ಟಿ ಚಿನ್ನದ ಗಣಿಗಳಲ್ಲಿ 1,64,771 ಟನ್‍ಗಳಷ್ಟು 0.08 % ದಿಂದ 0.10 % ಪ್ರತಿಶತ ಶಿಲೈಟ್ ಎಂಬ ಇನ್ನೊಂದು ಅದಿರು ಇರುವದನ್ನು ದೃಢಪಡಿಸಲಾಗಿದೆ.


ಪ್ರಸ್ತುತ ಗಣಿ ಗುತ್ತಿಗೆಯ ಪ್ರದೇಶದಲ್ಲಿ ಚಿನ್ನದ ಅದಿರನ ರೀಫ್‍ಗಳ ಉದ್ದಳತೆಗಳ ಹಾಗೂ ಆಳಗಳನ್ನು ಪ್ರಮಾಣಿಕರಿಸುವ ಕಾರ್ಯವು ಬಹುಮುಖ್ಯವಾಗಿದೆ. ಇತ್ತಿಚಿನ ವಜ್ರ ಕೊರೆಯುವ ಪ್ರಕ್ರಿಯೆಯು ಗಣಿಗಾರಿಕೆಯ ಸಾಮಥ್ಯವುಳ್ಳ ಖನಿಜ ಸಂಪತ್ತನ್ನು ದೃಢಪಡಿಸಿದೆ.
 ಇತ್ತೀಚಿನ ಅನ್ವೇಷಣಾ ಮೌಲ್ಯಮಾನದಿಂದ ಕಾರ್ಯದ ವರದಿಯು ಗಣಿಗಾರಿಕೆಯ ಕಾರ್ಯಸಾಧ್ಯತೆಗಾಗಿ ಇನ್ನಷ್ಟು ಅನ್ವೇಷಣೆ ಕಾರ್ಯದ ಅವಶ್ಯಕತೆಯನ್ನು ದೃಢಿಕರಿಸುತ್ತದೆ. ಇದರನ್ವಯ ಗ್ರೇ ಶಾಫ್ಟ್ ಹಾಗೂ ಸೌತ್ ಶಾಫ್ಟಗಳಲ್ಲಿ ಪರಿಶೋಧಾನಾತ್ಮಕ ಗಣಿ ಅಭಿವೃದ್ಧಿ ಕಾರ್ಯವನ್ನು ಆರಂಭಿಸಲು ಯೋಜಿಸಲಾಗಿದೆ.


ಕಾರ್ಯತಂತ್ರ :


ಖನಿಜ ಸಂಪನ್ಮೂಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕೆಳಗಿನ ಕಾರ್ಯತಂತ್ರಗಳನ್ನು ಅಳವಡಿಕೊಳ್ಳಲು ಯೋಜಿಸಲಾಗಿದೆ.


1)    ಕಡಿಮೆ ಆಳದಲ್ಲಿ ಗಣಿ ಅಭಿವೃದ್ಧಿ ಕಾರ್ಯವನ್ನು  ಕೈಗೊಳ್ಳಲು ಮೂಲಸೌಕರ್ಯವನ್ನು ಒದಗಿಸುವುದು
2)    ಹೊಸ ತಂತ್ರಜ್ಞಾನವನ್ನು ಆಳವಡಿಸಿಕೊಂಡು ಗಣಿ ಅಭಿವೃದ್ಧಿ ಕಾರ್ಯವನ್ನು ತಿವ್ರಗತಿಯಲ್ಲಿ ಮುಂದುವರೆಸುವುದು.

ಇತ್ತೀಚಿನ ನವೀಕರಣ​ : 10-07-2021 10:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080